Posts

Showing posts from July, 2015

NEWS FEED

1. Govt has launched schoolarships and educational loans. For more information please visit www.vidyalakshmi.co.in

2. Get latest information about malware, security best practices, countermeasures, security tools and download the- Free Bot Removal Tool- to secure/disinfect your system. Visit - www.cyberswachhtakendra.gov.in. An initiative by Govt. of India, Ministry of Electronics and IT (MeitY)

3. Advertisement page is available. Interested may contact Admin at 8880207888 for placement of any advertisement.It's totally FREE!!

ಒಮ್ಮೆ ಸತ್ತ ಮೇಲೆ ಮತ್ತೆ ಹುಟ್ಟುತ್ತೇವಾ?

Image
'ಅಧ್ಯಾತ್ಮ ಚರ್ಚೆ’ ಅಂತೇನಾದರೂ ಅಂದರೆ ಅನೇಕರು ಆಗಿಂದಾಗ್ಯೆ ಕಿವಿ ಕಣ್ಣುಗಳನ್ನು ಮುಚ್ಚಿಕೊಂಡು ಜಾಗ ಖಾಲಿ ಮಾಡಿಬಿಡುತ್ತಾರೆ. ಆದರೆ ಚರ್ಚೆ ಮಾಡಲಿ, ಬಿಡಲಿ.. ಆತ್ಮದಿಂದಲೇ ಜಗತ್ತು ವ್ಯಾಪ್ತಗೊಂಡಿರುವುದನ್ನು ಮರೆತೇಬಿಡುತ್ತಾರೆ. ಒಂದೇ ಒಂದು ನಿಮಿಷ ಸುಮ್ಮನೆ ಕಣ್ಮುಚ್ಚಿ ಕುಳಿತುಕೊಂಡು ನಾನು ಹೇಳುವ ವಿಚಾರಗಳ ಕುರಿತಂತೆ ಆಲೋಚಿಸಿ. ನೀವು ಖಂಡಿತ ಅಚ್ಚರಿಗೊಳಗಾಗುವಿರಿ.
ನಮ್ಮ ಸುತ್ತಲೂ ನಡೆಯುವ ಅನೇಕ ಸಂಗತಿಗಳನ್ನು ವಿಜ್ಞಾನ ಆಕಸ್ಮಿಕವೆಂದು ಕರೆದು ಬದಿಗಿಟ್ಟುಬಿಟ್ಟಿದೆ. ಉದಾಹರಣೆಗೆ, ಭೂಮಿಯೇ ಮೊದಲಾದ ಗ್ರಹಗಳು ಸೂರ್ಯನ ಸುತ್ತ ಸುತ್ತುವುದಲ್ಲ ಹಾಗೆ ಎಲ್ಲ ಗ್ರಹಗಳನ್ನು ಅಧೀನದಲ್ಲಿ ಇಟ್ಟುಕೊಂಡು ತನ್ನ ಸುತ್ತ ಸುತ್ತಿಸಿಕೊಳ್ತಿರುವ ವಿಶ್ವ ಪ್ರಜ್ಞೆಯನ್ನು ಸೂರ್ಯನಿಗೆ ಅದಾರು ಕೊಟ್ಟರು? ‘ಆಕಸ್ಮಿಕ’. ಬೀಜವೊಂದು ಮೊಳಕೆಯೊಡೆದು ಸಸಿಯಾಗುವ ಹಂತವೆಲ್ಲ ನಮಗೆ ಗೊತ್ತು. ಆದರೆ ಆ ಬೀಜಕ್ಕೆ ಮೊಳಕೆಯೊಡೆಯಬೇಕೆಂಬ ಪ್ರಜ್ಞೆ ಎಲ್ಲಿಂದ ಬಂತು? ಆಕಸ್ಮಿಕ. ಒಂದೆರಡು ವರ್ಷದ ಮಗುವನ್ನು ನೀರಿಗೆ ತಳ್ಳಿದರೆ ಉಸಿರು ಬಿಗಿ ಹಿಡಿಯಬೇಕೆಂಬ ಸಹಜ ಸಿದ್ಧಾಂತ ಅದರೊಳಗೆ ಕೂಡಲೇ ಜಾಗೃತವಾಗುತ್ತದೆ. ಹೇಳಿಕೊಟ್ಟಿದ್ದು ಯಾರು? ‘ಆಕಸ್ಮಿಕ. ಹುಟ್ಟಿದಾಕ್ಷಣ ಮಗು ತಾಯಿಯ ಮೊಲೆಯನ್ನು ಚೀಪಿ ಹಾಲು ಕುಡಿಯುತ್ತದಲ್ಲ, ತರಬೇತಿ ಕೊಟ್ಟ ಗುರು ಯಾರು? ‘ಆಕಸ್ಮಿಕ’!
ನಾನಂತೂ ಇಂತಹ ನೂರಾರು ವಿಸಮ್ಯಗಳನ್ನು ದಾಖಲಿಸಬಲ್ಲೆ. ಇಷ್ಟೊಂದು ಸಂಗತಿಗಳು ಆಕಸ್ಮ…

ಧೀಶಕ್ತಿ ಪ್ರಚೋದಕನಿಗೆ ಕೋಟಿ ನಮಸ್ಕಾರ…

Image
ಬೆಳಗ್ಗೆ ಎಷ್ಟು ಗಂಟೆಗೆ ಏಳಬೇಕು?” ಹಾಗಂತರಾಮಕೃಷ್ಣಆಶ್ರಮದ ಸ್ವಾಮಿ ಪುರುಷೋತ್ತಮಾನಂದರನ್ನು ಭಕ್ತರೊಬ್ಬರು ಕೇಳಿದರಂತೆ. ಸ್ವಾಮೀಜಿತಮ್ಮ ಎಂದಿನ ಧಾಟಿಯಲ್ಲಿ, “ಎಷ್ಟು ಗಂಟೆಗಾದರೂ ಎದ್ದೇಳಿ, ಎದ್ದ ಮೇಲೆ ಪೂರ್ಣವಾಗಿಎದ್ದಿರಿ”ಎಂದಿದ್ದರಂತೆ. ಅದೂ ಸತ್ಯವೇ. ಏಳುವುದು ಅಂದರೆ ಹಾಸಿಗೆ ಬಿಟ್ಟು ಏಳುವುದು ಅಂತಲ್ಲ. ದೇಹದ ಪ್ರತಿಯೊಂದುಜೀವಕೋಶವೂ ಚೈತನ್ಯಶೀಲಗೊಳ್ಳುವುದು ಎಂದರ್ಥ. ಮಲಗುವ ಕೋಣೆಯನ್ನುಕತ್ತಲ ಕೂಪವಾಗಿಸಿ, ಕೆಲಸದಕಚೇರಿಯನ್ನು ಸದಾ ಬೆಳಕಿನ ಗೋಳವಾಗಿಸಿ ಹಗಲು ರಾತ್ರಿಗಳ ಕಲ್ಪನೆಯನ್ನೇ ಕಳೆದುಕೊಂಡಿರುವ ನಮಗೆ ಋಷಿ ಮುನಿಗಳು ಉಲ್ಲೇಖ ಮಾಡಿರುವ ಅನೇಕ ಸಂಗತಿಗಳನ್ನು ಅರ್ಥೈಸಿಕೊಳ್ಳುವುದು ಬಿಡಿ, ಕಲ್ಪಿಸಿಕೊಳ್ಳುವುದೂ ಅಸಾಧ್ಯ.

ನಾವು ಬ್ರಾಹ್ಮೀ ಮುಹೂರ್ತವೊಂದರ ಬಗ್ಗೆ ಬಹುವಾಗಿ ಚರ್ಚಿಸುತ್ತೇವೆ. ಸೂರ್ಯೋದಯಕ್ಕೂ ಮುನ್ನಿನ ಸಮಯವದು. ಮನು ತನ್ನ ಸ್ಮøತಿಗ್ರಂಥದಲ್ಲಿ ಸ್ಪಷ್ಟಪಡಿಸುತ್ತಾನೆ, “ನಕ್ಷತ್ರಗಳು ಕಾಣುತ್ತಿರುವಾಗಲೇಎದ್ದು ಸೂರ್ಯ ನಮನಗೈಯುವುದು ಉತ್ತಮ. ನಕ್ಷತ್ರಗಳು ಅಸ್ತಮಿಸಿ ಸ್ವಲ್ಪವಷ್ಟೆ ಬೆಳಕು ಕಾಣುವಾಗಿನ ಉಪಾಸನೆ ಮಧ್ಯಮ. ಇನ್ನು ಸೂರ್ಯೋದಯವಾದ ಮೇಲೆ ಎದ್ದುಆತನಿಗೆಅಭಿವಂದಿಸುವುದುಅಧಮ”.
ಬ್ರಾಹ್ಮೀ ಮುಹೂರ್ತಅಂತರ್ಮುಖಿಯಾಗಿ ಬ್ರಹ್ಮನನ್ನುಅರಿಯಲುಅತ್ಯಂತ ಸೂಕ್ತ ಸಮಯ. ಇದನ್ನೇ ಉಷಃ ಕಾಲ ಅಂತಲೂಕರೆಯುತ್ತಾರೆ. ಉಷೆ ಸೂರ್ಯನ ಪತ್ನಿಯಂತೆ. ಸೂರ್ಯ ಬೆಳಗ್ಗೆ ಎದ್ದುಆಕೆಯನ್ನೇ ಹಿಂಬಾಲಿಸಿ ಬರುತ್ತಾನಂತ…

ಸರ್ವಾಂತರ್ಯಾಮಿ, ಸರ್ವಪ್ರೇರಕ ಸೂರ್ಯ

Image
ಕಾಲ ಗಣನೆಯ ಚರ್ಚೆ ಬಂದಾಗ ಜಗತ್ತಿನ ಯಾವ ವಿಜ್ಞಾನಿಯೂ ಭಾರತವನ್ನು ಕಡೆಗಣಿಸುವುದು ಸಾಧ್ಯವೇ ಇಲ್ಲ. ಈ ವಿಚಾರದಲ್ಲಿ ಜಗತ್ತಿನ ಆಧುನಿಕ ಮತಗಳೂ, ಮತ ಗ್ರಂಥಗಳೂ ಹಿಂದೂ ಚಿಂತನೆಗಳಿಗಿಂತ ಬಲು ಹಿಂದು! ಅನುಮಾನವೇ ಇಲ್ಲ. ‘ವಿಶ್ವದ ಕೇಂದ್ರ ಭೂಮಿ. ಸೂರ್ಯನೂ ಇದೇ ಭೂಮಿಯನ್ನು ಸುತ್ತುತ್ತಾನೆ’ ಹಾಗಂತ ಸೆಮೆಟಿಕ್ ಮತಗಳು ನಂಬಿದ್ದವು.  ದೇವರ ಮಕ್ಕಳು, ಪ್ರವಾದಿಗಳು ಇಲ್ಲಿ ಹುಟ್ಟುತ್ತಾರೆಂದರೆ ಇದೇ ಸರ್ವಶ್ರೇಷ್ಠವಾಗಿರಬೇಕೆಂಬ ಸಹಜ ಸಿದ್ಧಾಂತ ಅದು. ಜೊತೆಗೆ ಬೆಳಗಾಗಿ ಎದ್ದಾಗ ಪೂರ್ವಕ್ಕೆ ಕಾಣುವ ಸೂರ್ಯ ಸಂಜೆಯಾಗುವಾಗ ಪಶ್ಚಿಮದಲ್ಲಿ ಅಸ್ತಂಗತನಾಗುತ್ತಾನೆ. ಸಾಮಾನ್ಯನಾದ ಪ್ರತಿಯೊಬ್ಬನಿಗೂ ಸೂರ್ಯನೇ ನಮಗೆ ಪ್ರದಕ್ಷಿಣೆ ಹಾಕುತ್ತಿದ್ದಾನೆ ಅನ್ನಿಸುವುದರಲ್ಲಿ ತಪ್ಪೇನೂ ಇಲ್ಲ. ಪ್ರವಾದಿಗಳು ಅದನ್ನು ಹೇಳಿ ದೃಢಪಡಿಸಿ ಹೋದರು.  ಈಗಲೂ ಈ ವಾಕ್ಯಗಳನ್ನು ದೃಢವಾಗಿ ನಂಬಿರುವ ಅನೇಕರು “ಭೂಮಿ ತಿರುಗುವುದೇ ನಿಜವಾದರೆ ಮೇಲಕ್ಕೆಸೆದ ಚೆಂಡು ಕೆಳಗೆ ಬೀಳುವಾಗ ನಮ್ಮ ಕೈಗೇ ಬೀಳುವುದು ಹೇಗೆ? ಅದು ಪಕ್ಕದಲ್ಲೆಲ್ಲೋ ಹೋಗಿ ಬೀಳಬೇಕಲ್ಲವೆ? “ ಎಂದು ಬಾಲಿಶವಾಗಿ ಪ್ರಶ್ನಿಸುತ್ತಾರೆ. ಪಾಪ. ಇಂತಹವರ ವಿರುದ್ಧ ಅನೇಕ ಶತಮಾನಗಳ ಕಾಲ ವಿಜ್ಞಾನಿಗಳೂ ದನಿಯೆತ್ತಲಾಗದೆ ಕೊರಗಿದ್ದರು. ಕೋಪರ್ನಿಕಸ್, ಗೆಲಿಲಿಯೋರಂಥವರೆಲ್ಲ ಅದೇ ಸಾಲಿಗೆ ಸೇರಿದವರು. ಆದರೆ ಈ ದೇಶ ಹಾಗಲ್ಲ. ಕಣ್ಣಿಗೆ ಕಾಣುವ ಈ ವಿಶ್ವದ ಕೇಂದ್ರ ಸೂರ್ಯನೇ ಎಂಬ ಅರಿವು ಇಲ್ಲಿನವರಿಗೆ ಇತ್ತು.…

ಪುರಾಣಗಳೆಂದು ಜರಿಯದಿರಿ!

Image
ಶಿವ’ ಯಾವಾಗಲೂ ಕಾಡುವ ದೇವರೇ. ಅವನ ಆಕಾರ, ಬಣ್ಣ, ವೇಷ, ವಾಸ ಸ್ಥಳ, ಆಭರಣ ಇವ್ಯಾವುವೂ ಸರಳವಾದುದಲ್ಲ. ಅತ್ಯಂತ ಗೂಢವಾದುದೇನನ್ನೋ ವಿವರಿಸುವ ಪ್ರಯತ್ನ ಅದರ ಹಿಂದಿದೆ. ಕೊರಳಲ್ಲಿ ಹಾವು, ಮೈ ಪೂರಾ ಭಸ್ಮ, ಸೊಂಟಕ್ಕೆ ವ್ಯಾಘ್ರ ಚರ್ಮ, ಕತ್ತಲ್ಲಿ ರುಂಡ ಮಾಲೆ. ತಲೆಯ ಮೇಲೆ ಗಂಗೆ, ಹಣೆಯಲ್ಲಿ ಉರಿವ ಕಣ್ಣು. ಸ್ಮಶಾನ ವಾಸಿ, ಹಿಮಾಲಯದ ಒಡೆಯ. ಉಫ್.. ಎಲ್ಲವೂ ವಿಚಿತ್ರ. ಆತನ ಲಿಂಗ ರೂಪವಂತೂ ಅನೇಕ ವೈಜ್ಞಾನಿಕ ಸತ್ಯಗಳ ಮೂರ್ತ ರೂಪ.
ಅಲ್ಲದೆ ಮತ್ತೇನು? ಪ್ರಳಯ ಕಾಲದಲ್ಲಿ ಮಹಾ ಗುರುತ್ವಕ್ಕೆ ಒಳಗಾಗಿ ಬಿಗ್ ಕ್ರಂಚ್ ಆಗುವುದೆಂಬ ಕಲ್ಪನೆಯನ್ನು ಭೌತ ವಿಜ್ಞಾನಿಗಳು ಮುಂದಿಡುತ್ತಾರಲ್ಲ, ಅದು ನಡೆದಾಗ ಇಡಿಯ ವಿಶ್ವ ತಾಳಬಹುದಾದ ರೂಪ ಶಿವ ಲಿಂಗದ್ದೇ! ಅದಕ್ಕೇ ಆತನನ್ನು `ಮಹಾ ಕಾಲ’ ಅಂತ ಕರೆಯೋದು. `ಲಿಂಗ’ ಶೂನ್ಯದ ಕಲ್ಪನೆ. ಶೂನ್ಯ ಎಂದರೆ ಖಾಲಿ. ಖಾಲಿ ಎಂದರೆ ಅಕ್ಷರಶಃ ಪೂರ್ಣ ಖಾಲಿ. ಇದೆಷ್ಟು ವಿಚಿತ್ರ ಅಲ್ಲವೆ? ಪೂರ್ಣ ಮತ್ತು ಖಾಲಿ ಎರಡೂ ಸೇರಿಕೊಂಡದ್ದೇ ಲಿಂಗಾಕೃತಿ. ಹೀಗಾಗಿಯೇ ಅದಕ್ಕೆ ಪೂಜೆ. ಹೋಗಲಿ ಲಿಂಗವಲ್ಲದ್ದು ಪ್ರಕೃತಿಯಲ್ಲಿ ಏನಿದೆ ಹೇಳಿ. ನಮ್ಮ ಗೆಲಾಕ್ಸಿ ಕ್ಷೀರಪಥ, ಗ್ರಹಗಳು ಸೂರ್ಯನ ಸುತ್ತ ಸುತ್ತುವ ಪರಿ, ಕೊನೆಗೆ ಕಣ್ಣೆದುರು ಕಾಣುವ ಬೆಟ್ಟ ಗುಡ್ಡಗಳೂ ಭೂಮ ಲಿಂಗವೇ. ಅದಕ್ಕೇ ದ.ರಾ.ಬೇಂದ್ರೆ ‘ಗುಡ್ಡ ಗುಡ್ಡ ಸ್ಥಾವರ ಲಿಂಗ / ಅದಕ್ಕೆ ಮುಗಿಲಿನ ಅಭ್ಯಂಗ’ ಅಂತ ಕುಣಿಕುಣಿದು ಹಾಡಿದ್ದು. ಕೈಲಾಸ ಪರ್ವತ ಬಿಡಿ, ಹಿ…

ನಟರಾಜ ನರ್ತನದ ಚಿದಂಬರ ರಹಸ್ಯ!

Image
‘ಕಣ್ಣಿನಿಂದ ನೋಡಿದ್ದು ಮಾತ್ರ ಸತ್ಯ’ – ಹಾಗಂತ ಅನೇಕರು ವಾದಿಸುತ್ತಾರೆ. ಅಚ್ಚರಿ ಏನು ಗೊತ್ತೆ? ಕಣ್ಣು ತನ್ನನ್ನು  ತಾನು ನೋಡಿಯೇ ಇಲ್ಲ! ಚರ್ಮಕ್ಕೆ ಸ್ಪರ್ಶಾನುಭೂತಿ ಬೇಕೆಂದರೆ ಮತ್ತೊಂದರ ಸಂಪರ್ಕ ಬೇಕೇಬೇಕು. ನಾಲಗೆಯ ರುಚಿ ಸ್ವತಃ ನಾಲಗೆಗೆ ಗೊತ್ತಿಲ್ಲ. ಹೀಗೆ ಐದು ಇಂದ್ರಿಯಗಳೂ ಒಟ್ಟಿಗೆ ಗ್ರಹಿಸಲಾಗದ ಅನೇಕ ಸಂಗತಿಗಳಿವೆ. ಅದರ ಹುಡುಕಾಟವೇ ಭಾರತದ ಶ್ರೇಷ್ಠತೆಯ ಮೂಲ ವಸ್ತು. ಕೇನೋಪನಿಷತ್ತಿನಲ್ಲಿ ಋಷಿಗಳು ಸ್ಪಷ್ಟಪಡಿಸುತ್ತಾರೆ – “ಅಲ್ಲಿಗೆ ಕಣ್ಣು ಹೋಗಲಾರದು, ಮಾತೂ ಇಲ್ಲ. ಮನಸ್ಸೂ ಹೋಗುವುದಿಲ್ಲವಾದ್ದರಿಂದ ಇದನ್ನು ಹೇಗೆ ತಿಳಿಸಿಕೊಡಬೇಕೋ ಗೊತ್ತಾಗುತ್ತಿಲ್ಲ” ಎಂದು. ಅದಕ್ಕೇ ಇಂದ್ರಿಯಗಳನ್ನು ನಿಗ್ರಹಿಸಿ, ಬುದ್ಧಿಯಡಿ ಮನಸ್ಸನ್ನು ತಂದು ಸಾಧನೆಗೆ ಅಣಿಯಾಗುವ ಮಾರ್ಗಗಳನ್ನು ಅವರು ಸಂಶೋಧಿಸಿದ್ದು. ಈ ಹುಡುಕಾಟದ ಹಿಂದೆ ಬಿದ್ದುದರಿಂದಲೇ ಸೃಷ್ಟಿಯ ಅಪರೂಪದ ಸತ್ಯಗಳು ಅವರೆದುರಿಗೆ ತೆರೆದುಕೊಂಡವು. ಈ ಸತ್ಯಗಳನ್ನು ಜಗದೆದುರಿಗೆ ಒಪ್ಪಿಸುವ ಪದಕೋಶಗಳೇ ಇರಲಿಲ್ಲ. ಹೇಳಿದರೆ ಅರ್ಥೈಸಿಕೊಳ್ಳುವವರೂ ಇರಲಿಲ್ಲ. ಎಲ್ಲಕ್ಕೂ ಮುಖ್ಯವಾಗಿ ಆ ಪರಮ ಸತ್ಯ ಗೋಚರವಾದೊಡನೆ ಅದರಲ್ಲಿ ಲೀನವಾದ ಪ್ರತಿಯೊಬ್ಬ ಋಷಿಯೂ ಮೌನಿಯಾಗಿಬಿಟ್ಟ. ಹಾಗೆಂದೇ ಅದನ್ನು ವಿವರಿಸಲಾಗದು; ಅನುಭವಿಸಬೇಕು ಎನ್ನಲಾಯ್ತು. ಕೇನೋಪನಿಷತ್ತು ಮುಂದುವರಿದು, “ಮಾತಿನಿಂದ ವಿವರಿಸಲಾಗದ್ದು, ಯಾವುದರಿಂದ ಮಾತು ಹುಟ್ಟಿತೋ ಅದು; ಯಾವುದನ್ನು ಮನಸ್ಸಿನಿಂದ ತಿಳಿಯಲಾಗ…

ಆಡಮ್ ವೇದಗಳಿಗೆ ತಲೆ ಬಾಗಿದ್ದು ಯಾಕೆ ಗೊತ್ತಾ?

Image
ಭಾರತದ ಇತಿಹಾಸ ಅಂದರೆ ಅದು ಬರಿಯ ಜನಜೀವನ ಅಷ್ಟೇ ಅಲ್ಲ, ಅದು ರೋಚಕ ಕಥಾನಕಗಳ ಆಗರ. ಅಲ್ಲಿ ಅಧ್ಯಾತ್ಮವಿದೆ, ಪುರಾಣವಿದೆ, ಶಾಂತಿಮಂತ್ರಗಳಿವೆ, ಕ್ರಾಂತಿ ಬೀಜಗಳೂ ಇವೆ. ಹೆಣ್ಣು – ಗಂಡು ಸಮಸಮವಾಗಿ ಇಲ್ಲಿ ಬೀಗಿದ್ದಾರೆ. ನದಿ ಬೆಟ್ಟ ಮರುಭೂಮಿಗಳೂ ತಮ್ಮ ಕೊಡುಗೆ ನೀಡಿವೆ. ಹಿಮಾಲಯ – ಸಾಗರವೂ ಇಲ್ಲಿನ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ. ಅಸಂಖ್ಯ ಸಂತರು; ಲೆಕ್ಕವಿಲ್ಲದಷ್ಟು ಋಷಿಮುನಿಗಳು ಪರಣಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಇವೆಲ್ಲವನ್ನೂ ನಾಶಗೈಯುವ ಷಡ್ಯಂತ್ರಗಳೂ ಆಗಿವೆ. ಮಿಡತೆಯ ಹಿಂಡಿನಂತೆ ಅನ್ಯರ ಆಕ್ರಮಣಗಳೂ ಆಗಿವೆ! ‘ಮ್ಯಾಕ್ಸ್ ಮುಲ್ಲರ್’! ಕೆಲವರಿಗೆ ಭಾರತದ ಇತಿಹಾಸ ೧೨ನೇ ಶತಮಾನದಿಂದ ಆರಂಭವಾದರೆ, ಇನ್ನು ಕೆಲವರಿಗೆ ಶಂಕರರ ಹುಟ್ಟಿನೊಂದಿಗೆ. ಕೆಲವರು ಬುದ್ಧನ ಜನನದಿಂದಲೇ ಭಾರತದ ಇತಿಹಾಸ ಗಣನೆ ಶುರು ಮಾಡಿದರೆ, ಇನ್ನೂ ಕೆಲವರು ರಾಮ – ಕೃಷ್ಣ – ಉಪನಿಷತ್ತು ಎನ್ನುತ್ತಾರೆ. ಆದರೆ ಈ ದೇಶದ ಮತ್ತು ಜಗತ್ತಿನ ಕೆಲವು ‘ಪಂಡಿತೋತ್ತಮರಿಗೆ’ ಭಾರತದ ಇತಿಹಾಸವೆಂದರೆ ಅದು ಮ್ಯಾಕ್ಸ್ ಮುಲ್ಲರ್ ಮಾತ್ರ. ಅವನ ಹೇಳಿಕೆಗಳು, ಬರಹಗಳು, ಪತ್ರಗಳೇ ಭಾರತವನ್ನು ನೋಡುವ ದೃಷ್ಟಿಕೋನ ಅವರಿಗೆ. ಅನೇಕರ ಪಾಲಿಗೆ ಆತ ಋಷಿ, ಯೋಗಿ, ಸಂಸ್ಕೃತ ಪಂಡಿತ ಎಲ್ಲವೂ ಕೂಡ. ಆದರೆ ವಾಸ್ತವವಾಗಿ ಆತ ಭಾರತದ ಕುರಿತಂತೆ ಅನೇಕ ಗೊಂದಲಗಳಿಗೆ ಕಾರಣನಾದ ವ್ಯಕ್ತಿ. ಆರ‍್ಯರ ಆಕ್ರಮಣ ವಾದದಿಂದ ಹಿಡಿದು ಕಾಲ ಗಣನೆಯವರೆಗೆ ಆತ ಮಾಡಿದ ಊಹೆಗಳು ಇಂದು ಸಾಕ…

ಭಾರತಕ್ಕೆ ಹೊರಡುವ ಮುನ್ನ ಮೆಕಾಲೆ ಹೇಳಿದ್ದೇನು ಗೊತ್ತಾ?

Image
ಕಲ್ಕತ್ತಾಕ್ಕೆ ಬಂದು ಮೆಕಾಲೆ ನೆಲೆ ನಿಂತ.ಇಲ್ಲಿನ ಯಾವುದರಲ್ಲೂ ಒಳಿತನ್ನು ಕಾಣಬಾರದೆಂದು ಅವನು ನಿಶ್ಚಯಿಸಿದ್ದ.ಭಾರತೀಯರು ಅನಾಗರಿಕರು,ದುಷ್ಟರು ಎಂಬ ವಿಲ್ಬರ್ ಫೋರ್ಸ್ ನ ಮಾತುಗಳು ಅವನನ್ನು ಚೆನ್ನಾಗಿ ರೂಪಿಸಿಬಿಟ್ಟಿದ್ದವು. ’ಇಲ್ಲಿ ಕೆಲಸ ಮಾಡುವುದರ ಲಾಭ ಸಾಕಷ್ಟಿದೆ. ಗೌರವವೂ ಹೆಚ್ಚಿದೆ. ಸಂಬಳವೂ ವಾರ್ಷಿಕ ಹತ್ತು ಸಾವಿರ ಪೌಂಡುಗಳಷ್ಟು. ವರ್ಷಕ್ಕೆ ೫ ಸಾವಿರ ಪೌಂಡುಗಳಷ್ಟು ಖರ್ಚು ಮಾಡಿದರೆ ಇಲ್ಲಿ ರಾಜನಂತೆ ಬದುಕಬಹುದು. ಉಳಿದಷ್ಟನ್ನೂ ಉಳಿಸಿ ಬಡ್ಡಿಯನ್ನೂ ಗಳಿಸಬಹುದು. ನನಗೆ 39 ವರ್ಷಗಳಾಗುವಾಗ ನಾನು ೩೦ ಸಾವಿರ ಪೌಂಡುಗಳೊಂದಿಗೆ ಉತ್ಸಾಹಿತನಾಗಿ ಮರಳುತ್ತೇನೆ’.
ಹೀಗೊಂದು ಪತ್ರವನ್ನು ಯಾರು ಬರೆದಿರಬಹುದೆಂಬ ಪ್ರಶ್ನೆ ನಿಮ್ಮನ್ನು ಕೇಳಿದರೆ ಉತ್ತರ ಅದೇನು ಬರಬಹುದು ಹೇಳಿ ! ಹಳ್ಳಿಯಿಂದ ಹೊರಟ ಬಡ ಭಾರತದ ಉದ್ಯೋಗಿ ಶ್ರೀಮಂತ ಅಮೇರಿಕದಿಂದಲೋ -ಯೂರೋಪಿನಿಂದಲೋ ಬರೆದಿರಬೇಕೆಂದು ಊಹಿಸುತ್ತೀರಿ ತಾನೇ ? ನಿಮ್ಮ ಊಹೆ ಅಕ್ಷರಶಃ ಸುಳ್ಳು.
ಇದು ಮೆಕಾಲೆ 1833 ರಲ್ಲಿ ತನ್ನ ಸೋದರಿ ಹನ್ನಾಹ್ ಳಿಗೆ ಬರೆದ ಪತ್ರ.ತಾನು ಭಾರತಕ್ಕೆ ಹೊರಟು ನಿಂತಾಗ! ಬಡ ಇಂಗ್ಲೇಂಡಿನಿಂದ ಶ್ರೀಮಂತ ಭಾರತಕ್ಕೆ ಹೊರಟಾಗ!!.
ಮೆಕಾಲೆ. ಹೌದು ಅಕ್ಷರಶಃ ಥಾಮಸ್ ಬ್ಯಾಬಿಂಗ್ಟನ್ ಮೆಕಾಲೆಯೇ. ಜಾಕರಿ ಮೆಕಾಲೆ ಮತ್ತು ಸೆಲಿನಾ ಮಿಲ್ಟ್ ರ ಮಗನಾಗಿ 1800 ರಲ್ಲಿ ಜನಿಸಿದವ. ಚಿಕ್ಕಂದಿನಿಂದಲೂ ಕ್ರಿಶ್ಚಿಯಾನಿಟಿಯ ಮೇಲೆ ಅಖಂಡ ಭಕ್ತಿ ಅವನಿಗೆ, ತಾತ ಪ್ರೆಸ್ಟಿಟೇ…