Posts

Showing posts from August, 2015

NEWS FEED

1. Govt has launched schoolarships and educational loans. For more information please visit www.vidyalakshmi.co.in

2. Get latest information about malware, security best practices, countermeasures, security tools and download the- Free Bot Removal Tool- to secure/disinfect your system. Visit - www.cyberswachhtakendra.gov.in. An initiative by Govt. of India, Ministry of Electronics and IT (MeitY)

3. Advertisement page is available. Interested may contact Admin at 8880207888 for placement of any advertisement.It's totally FREE!!

ಕುಂಡಲಿನಿ, ನಮ್ಮೊಳಗಿನ ಸುಪ್ತ ಶಕ್ತಿ ಸಂಜೀವಿನಿ

Image
ಶಿವನಿಗೆ ಮೂರನೇ ಕಣ್ಣು ಇರೋದು ಕಲಾವಿದನ ಕಲ್ಪನೆಯಾ ಅಥವಾ ಹಾಗೊಂದು ಸಾದ್ಯತೆ ಇದೆಯಾ? ಹೌದು, ಪುರಾಣದ ಕಥೆಗಳು ನಮ್ಮನ್ನು ಪ್ರಗತಿಂದ ದೂರ ತಳ್ಳಿಬಿಡುವ ಭಯ ಯಾವಾಗಲೂ ಇದ್ದದ್ದೇ. ಆದರೆ ಪ್ರಾಮಾಣಿಕವಾಗಿ ಹೇಳಿ, ಅನೇಕ ಬಗೆಯ ಅತೀಂದ್ರಿಯ ಶಕ್ತಿಗಳು ನಮಗೂ ಇಲ್ಲವೇ?
ಉದಾಹರಣೆಗೆ ಕೆಲವು ಅಪರೂಪದ ಘಟನೆಗಳು ಆಗಾಗ ನಮ್ಮ ಅನುಭವಕ್ಕೆ ಬರುತ್ತಲೇ ಇರುತ್ತವೆ. ಯಾರನ್ನೋ ಉತ್ಕಟವಾಗಿ ನೆನಪಿಸಿಕೊಳ್ಳುತ್ತಿರುತ್ತೇವೆ, ಅವರ ಫೋನ್ ಕಾಲ್ ಬರುತ್ತೆ ಅಥವಾ ಅವರೇ ಹಾಜರಾಗಿಬಿಡ್ತಾರೆ. ಆಗೆಲ್ಲ ನಿಮಗೆ ನೂರು ವರ್ಷ ಆಯಸ್ಸು ಅಂತೀವಿ. ದೂರದೂರಿನಲ್ಲಿ ಮಗ ತೊಂದರೆಗೆ ಸಿಕ್ಕಿ ಹಾಕಿಕೊಂಡಿರ್ತಾನೆ, ಇಲ್ಲಿ ಯಾವುದರ ಅರಿವಿಲ್ಲದಿದ್ದರೂ ತಾಯ ಎದೆ ಬಡಿತ ಜೋರಾಗಿರುತ್ತೆ. ಇವತ್ತು ಆಫೀಸಿನಲ್ಲಿ ಅವಘಡ ನಡೆದೇ ನಡೆಯುತ್ತೆ ಅಂತ ಮನಸ್ಸು ಹೇಳುತ್ತಿರುತ್ತೆ; ಸಂಜೆಯೊಳಗೆ ರಾದ್ದಾಂತವೇ ಆಗಿಬಿಟ್ಟಿರುತ್ತೆ. ಹೇಗೆ ಇದೆಲ್ಲ? ಪ್ರತೀಬಾರಿ ‘ಆಕಸ್ಮಿಕ’ವೇ ಉತ್ತರವೇ. ಅಥವಾ ಕಾಕತಾಳೀಯವೆಂದು ತಳ್ಳಿಬಿಡೋಣವೆ? ಪ್ರಾಮಾಣಿಕವಾಗಿ ಯೋಚಿಸಿ ಇವೆಲ್ಲ ಹೇಗೆ ಸಾಧ್ಯ?

ವಿಜ್ಞಾನದ ಮರೆಯಲಿ ನಿಂತು ಹಿಂದು ಧರ್ಮದ ಮೇಲೆ ಕಲ್ಲೆಸೆಯುವವರಿಗೆ ಒಂದು ಅಚ್ಚರಿಯ ಸಂಗತಿ ಹೇಳಲೇಬೇಕು. ಕಳೆದ ಕೆಲವಾರು ವರ್ಷಗಳ ಹಿಂದೆ ಮೆದುಳಿನ ಬರೋಬ್ಬರಿ ಮಧ್ಯ ಭಾಗದಲ್ಲಿ ವಿಜ್ಞಾನಿಗಳು ‘ಪಿನಿಯಲ್ ಗ್ಲ್ಯಾಂಡ್’ನ್ನು ಗುರುತಿಸಿದರು. ಇದು ಗೋಧಿಯ ಕಾಳಿನ್ಟದ್ದು ನಮ್ಮ ಪಾಲಿಗೆ ನಿದ್ದೆಯ ನಿಯಂತ್ರಣಕ್ಕೆ ಕಾ…

ಇದು ಬೌದ್ಧಿಕ ಕ್ಷತ್ರಿಯರ ಯುದ್ಧ

ಅಮೇರಿಕಾದ ಪ್ರಿಸ್ನಟನ್ ನ ಶಾಲೆ. ಅಲ್ಲಿನ ಶಿಕ್ಷರರೊಬ್ಬರು ದೆಹಲಿ ಮೂಲದ ಹಿಂದೂವೊಬ್ಬರನ್ನು ವಿವೇಕಾನಂದರು ಮತ್ತು ರಾಮಕೃಷ್ಣರ ಕುರಿತಂತೆ ಮಕ್ಕಳಿಗೆ ಪಾಠ ಮಾಡಬಾರದೆಂದು ನುಡಿದರು.ಆಶ್ಚರ್ಯಚಕಿತರಾದ ಆತ ಹುಬ್ಬೇರಿಸಿ ಏಕೆಂದು ಕೇಳಿದರೆ ಅವರು ಸಲಿಂಗಕಾಮಿಗಳಾಗಿದ್ದರಂತೆ ಎಂಬ ಉತ್ತರ ಬಂತು.ಬೆಚ್ಚಿ ಬಿದ್ದ ಭಾರತೀಯ ಮೂಲದ ವ್ಯಕ್ತಿ ಹಾಗೆ ಹೇಳಿದ್ದು ಯಾರೆಂದು ಕೇಳಿದ್ದಕ್ಕೆ ಅವರು ಆತನ ಕೈಗೊಂದು ಪುಸ್ತಕವಿತ್ತರು.ಅದು ಜೆಫ್ರಿ ಕೃಪಾಲ್ ಬರೆದಿದ್ದ ‘ಕಾಳಿಯ ಮಕ್ಕಳು’. ಕೃತಿಯುದ್ದಕ್ಕೂ ವಿಕೃತಿಗಳೇ ತುಂಬಿದ್ದುದನ್ನು ಕಂಡು ಅಸಹ್ಯದಿಂದ ಬೆಂದು ಹೋದ ಆತ ಅಮೇರಿಕಾದ ಬುದ್ಧಿವಂತರ ನಡುವೆ ತಿರುಗಾಡುತ್ತಿರುವ ಹಿಂದೂಗಳ ಅವಹೇಳನ ಮಾಡುವ ಅನೇಕ ಪುಸ್ತಕಗಳನ್ನು ಹುಡುಕಿದರು.ಅದರ ಕುರಿತಂತೆ ಇತರ ಹಿಂದೂಗಳಿಗೆ ಗೊತ್ತಿರಲಿಲ್ಲವೆಂದಲ್ಲ.ಆದರೆ ಅವರು ಅದೆಷ್ಟು ಅವಮಾನಿತರಾಗಿದ್ದರೆಂದರೆ ಬಾಯಿ ತೆರೆಯಲಾಗದೇ ಮೌನ ವಹಿಸಿ ಬಿಟ್ಟಿದ್ದರು.ಶಾಲೆಗಳಲ್ಲಿ ಹಿಂದೂವಾಗಿರುವುದು ಮಗುವೊಂದಕ್ಕೆ ಅತ್ಯಂತ ಕಠಿಣವಾಗಿತ್ತು.ಓರಗೆಯ ಕ್ರಿಶ್ಚಿಯನ್ನರು ಹಿಂದೂ ದೇವ-ದೇವಿಯರನ್ನು ಆಡಿಕೊಂಡು ನಗುವಾಗ ಇವರೆಲ್ಲ ಬರಿಯ ಮೂಕ ಪ್ರೇಕ್ಷಕರಷ್ಟೇ. ರಾಜೀವ್ ಮಲ್ಹೋತ್ರಾ! ಬ್ರೇಕಿಂಗ್ ಇಂಡಿಯಾ, ಬೀಯಿಂಗ್ ಡಿಫರೆಂಟ್, ಇಂದ್ರಾಸ್ ನೆಟ್ ಗಳ ಮೂಲಕ ಅಮೇರಿಕಾದಾದ್ಯಂತ ಹರಡಿಕೊಂಡಿರುವ ಹಿಂದೂ ವಿರೋಧಿಗಳಿಗ ಸೂಕ್ತ ಉತ್ತರ ಕೊಡುತ್ತಿರುವ ವ್ಯಕ್ತಿ. ಎಡಪಂಥದ ಗಬ್ಬು ಘಾಟಿನಲ್ಲಿಯೇ ಕ…

ನಮ್ಮ ಸುಖಕ್ಕಾಗಿ ತನ್ನ ಜೀವ ಕೊಡುವ ಯೋಧನ ಕಷ್ಟ ಕೇಳಿದ್ದೇವಾ?

ಒಂದು ಗಂಭೀರ ಪ್ರಶ್ನೆಯನ್ನು ಈ ಸಂದರ್ಭದಲ್ಲಿ ಕೇಳಲೇಬೇಕಾಗಿದೆ. ನಿಜಕ್ಕೂ ನಾವು ನಮ್ಮ ಸೈನಿಕರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೆವಾ? ಅವರಿಗೆ ಸಿಗಬೇಕಾದ ಮರ್ಯಾದೆ ಸಿಗುತ್ತಿದೆಯಾ? ನಮ್ಮ ನೆಮ್ಮದಿ, ಮೋಜು, ತೆವಲು, ರಕ್ಷಣೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಟ್ಟಿರುವ, ನಮ್ಮ ಕುಟುಂಬದ ಒಳಿತಿಗಾಗಿ ತಮ್ಮ ಸಂಸಾರವನ್ನೇ ಪಣಕ್ಕಿಡುವ ಸೈನಿಕರ ಕ್ಷೇಮಕ್ಕಾಗಿ ನಾವು ಮಾಡುತ್ತಿರುವುದೇನು? ದೇಶ ರಕ್ಷಣೆಯ ಮುಂದೆ ಎಲ್ಲವೂ ಗೌಣ ಎಂದು ಭಾವಿಸಿರುವ ಸೈನಿಕರನ್ನು ನಾವು ಹೇಗೆ ನಡೆಸಿಕೊಳ್ಳುತ್ತಿದ್ದೇವೆ? ದೇಶ ರಕ್ಷಣೆಗಾಗಿ ಸರ್ವಸ್ವವನ್ನೂ ಧಾರೆಯೆರೆಯುವ, ಅದನ್ನೇ ತನ್ನ ಜೀವನದ ಪರಮ ಪವಿತ್ರ ಕಾರ್ಯ ಎಂದು ಭಾವಿಸಿರುವ ಸೈನಿಕನಿಗೆ ನಾವು ಎಷ್ಟು ಪ್ರೀತಿ ತೋರಿದ್ದೇವೆ? ಅವನ ಕೆಲಸವನ್ನು ಮೆಚ್ಚಿ ಮೈದಡವಿದ್ದೇವೆ? ಅವನ ಶ್ರಮ, ರಕ್ತ, ಕಣ್ಣೀರಿಗೆ ಯಾವ ಬೆಲೆಯಿದೆ?
ಈ ಪ್ರಶ್ನೆಯನ್ನು ಕೇಳಲೇ ಬೇಕಾಗಿದೆ.
ಈ ಜಗತ್ತಿನ ಅತ್ಯಂತ ಎತ್ತರದ ಮತ್ತು ದುರ್ಗಮವಾದ ಯುದ್ಧಭೂಮಿ ಎಂದು ಕರೆಯಿಸಿಕೊಳ್ಳುವ ಸಿಯಾಚಿನ್ ಪ್ರದೇಶವನ್ನೊಮ್ಮೆ ಸುಮ್ಮನೆ ಮಸ್ಸಿನಲ್ಲಿ ಕಲ್ಪಿಸಿಕೊಳ್ಳಿ. ಮತ್ತೇನೂ ಹೇಳೋದು ಬೇಡ, ನಮಗೆ ‘ಅರ್ಧ’ ದಿನ ಅಲ್ಲಿರಲು ಸಾಧ್ಯವಿಲ್ಲ. ಮೂಳೆಯ ಮೂಲೆ ಮೂಲೆ ಕೊರೆಯುವ ಮೈನಸ್ ಎಪ್ಪತ್ತು ಡಿಗ್ರಿ ಹವಾಮಾನವಿರುವ ಭೀಕರ ಚಳಿ, ಶೀತಗಾಳಿ, ಕೆಲ ಕಾಲ ಬರಿ ಮೈಯನ್ನು ಗಾಳಿಗೆ ಬಿಟ್ಟರೆ ಮರಗೆಟ್ಟು ಹೋಗುವಂಥ ವಿಷಮ ವಾತಾವರಣ, ಹಿಮ ಪರ್ವತದ ಹೊರತಾಗಿ ಮತ್ತೇನೂ ಕಾಣದ, …

ಭಾರತೀಯ ಚಿಂತನೆಗಳು ಜಗವನ್ನೆ ಆಳಲಾರಂಭಿಸಿವೆ…!

Image
ರಮಣ ಮಹರ್ಷಿಗಳ ಬದುಕಿನ ಈ ಘಟನೆ ಬಲು ಜನಜನಿತ. ಅದೊಮ್ಮೆ ಅವರು ಭಕ್ತರೊಂದಿಗೆ ಮಾತಾಡುತ್ತ ಕುಳಿತಿದ್ದರು. ಅವರ ತೋಳಿನ ಹುಣ್ಣಿಗೆ ಚಿಕಿತ್ಸೆ ನೀಡಲೆಂದು ಅದೇ ಹೊತ್ತಿಗೆ ವೈದ್ಯರು ಬಂದರು. ಚಿಕಿತ್ಸೆ ಸಮಯದಲ್ಲಿ ತೀವ್ರ ನೋವು ಉಂಟಾಗುತ್ತದೆಯಾದ್ದರಿಂದ ಅರೆವಳಿಕೆ ಮದ್ದು ಕೊಡುವುದು ಒಳ್ಳೆಯದೆಂದು ವೈದ್ಯರ ಅಭಿಮತ. ರಮಣರು ನಿರಾಕರಿಸಿದರು.“ತೋಳಿನಿಂದ ಮನಸ್ಸನ್ನು ತೆಗೆದುಬಿಡುತ್ತೇನೆ. ಆಮೇಲೆ ಏನು ಬೇಕಾದರೂ ಮಾಡಿಕೊಳ್ಳಿ” ಎಂದು ಒಂದು ನಿಮಿಷ ಕಣ್ಮುಚ್ಚಿ ತೆರೆದರು. ಭಕ್ತರೊಂದಿಗೆ ಮಾತುಕತೆ ಮುಂದುವರೆಯಿತು. ಅತ್ತ ವೈದ್ಯರು ತಮ್ಮ ಉಪಚಾರ ಶುರು ಮಾಡಿದರು. ರಮಣರ ಮುಖದಲ್ಲಿ ಒಂದು ಗುಲಗಂಜಿಯಷ್ಟೂ ನೋವು ಕಾಣಿಸಲಿಲ್ಲ. ಎಲ್ಲ ಮುಗಿಯಿತೆಂದು ವೈದ್ಯರು ಹೇಳಿದ ಮೇಲೆ ರಮಣರು ನಕ್ಕು ನಮಸ್ಕರಿಸಿದರು, ಅಷ್ಟೆ.

ಮೊದಲೆಲ್ಲ ಇದು ಭಕ್ತರ ಕಪೋಲಕಲ್ಪಿತ ಕತೆ ಎಂದು ನಾನು ಭಾವಿಸಿದ್ದೆ. ನನಗೆ ಗೊತ್ತು, ನಿಮ್ಮಲ್ಲನೇಕರು ಈ ಕಥೆ ಓದುತ್ತ ಮೂಗು ಮುರಿದಿರುತ್ತೀರಿ. ಆದರೆ ಹಿಮಾಲಯದ ಪರ್ವತಗಳಲ್ಲಿ ಕೊರೆವ ಚಳಿಯಲ್ಲಿ ಮಂಜಿನ ರಾಶಿಯ ನಡುವೆ ನಗುನಗುತ್ತ ಕೌಪೀನದಲ್ಲಿ ಕುಳಿತಿರುವ ಸಾಧುಗಳನ್ನು ಕಂಡ ಮೇಲೆ ಈ ಪ್ರಕ್ರಿಯೆ ಸಾಧ್ಯವೆನ್ನಿಸಿತ್ತು. ನಾನು – ನೀವು ನಂಬುವುದನ್ನು ಬಿಡಿ. ಪಶ್ಚಿಮದ ಅನೇಕ ವಿಜ್ಞಾನಿಗಳು ಇಂದು ನಂಬಲು ಶುರು ಮಾಡಿದ್ದಾರೆ. ಮೆದುಳಿನ ಅಧ್ಯಯನದ ವಿಜ್ಞಾನ ಬೆಳೆದಂತೆಲ್ಲ ಭಾರತೀಯ ಚಿಂತನೆಗಳು ಜಗತ್ತನ್ನು ಆಳಲಾರಂಬಿಸಿವೆ.
ಹಾಗೆ ನ…

ಆಲೋಚನೆಗಳ ಹಿಂದಿನ ಚಿತ್ತ ವಿಚಿತ್ರ

Image
ನಾನು ಖಂಡಿತವಾಗಿ ವಿಜ್ಞಾನದ ವಿರೋಧಿಯಲ್ಲ. ಆದರೆ ಎಲ್ಲ ಪ್ರಶ್ನೆಗೂ ಭೌತಿಕ ವಿಜ್ಞಾನ ಉತ್ತರಿಸಬಲ್ಲದು ಎಂಬುದನ್ನು ಒಪ್ಪಲಾರೆ ಅಷ್ಟೇ. ಮತ್ತೆ ಮತ್ತೆ ಒತ್ತಿ ಹೇಳುತ್ತೇನೆ; ಯಾವ ಪ್ರಶ್ನೆಗೆ ವಿಜ್ಞಾನ ಉತ್ತರಿಸುವುದನ್ನು ನಿಲ್ಲಿಸುವುದೋ, ಅಲ್ಲಿಂದಾಚೆಗೆ ಅಧ್ಯಾತ್ಮ ಶುರುವಾಗುತ್ತದೆ.
ಸುಮ್ಮನೆ ಚರ್ಚೆ ಯಾಕೆ? ಸೈನಿಕರಾಗಿದ್ದ ಹಜಾರೆ, ಜೀವನದಲ್ಲಿ ನೊಂದು ಬೆಂದು ಆತ್ಮಹತ್ಯೆಯ ತಯಾರಿಯಲ್ಲಿದ್ದಾಗ ವಿವೇಕಾನಂದರ ಮಾತಿನ ಸಾಲುಗಳಿಂದ ಪ್ರಭಾವಿತರಾಗಿ ಬದುಕು ಬದಲಿಸಿಕೊಂಡರು – ಹಾಗಂತೆ ಓದಿದ್ದೇವೆ, ಅಣ್ಣಾ ಬಾಯಿಂದಲೂ ಕೇಳಿದ್ದೇವೆ. ಈಗ ಹೇಳಿ. ಅಣ್ಣಾ ವಿವೇಕಾನಂದರಿಂದ ಪ್ರಭಾವಿತರಾದ ದಿನ ವೈಜ್ಞಾನಿಕವಾಗಿ ಆದದ್ದೇನು? ಅಣ್ಣಾ ದೇಹದಲ್ಲಿ ಆಮ್ಲಜನಕ ಹೆಚ್ಚಾಯ್ತೆ? ಜಲಜನಕವೋ? ಪ್ರಭಾವವಾಗಿದ್ದು ಇಂದ್ರಿಯಗಳ ಮೇಲೋ, ದೇಹದ ಮೇಲೋ, ರಕ್ತ – ಮೂಳೆ, ಮಾಂಸಗಳ ಮೇಲೋ? ಮನಸ್ಸು ಅಂದೀರಿ ಜೋಕೆ! ಅದು ಕಣ್ಣಿಗೆ ಕಾಣದಿರುವುದರಿಂದ ಮೂಸಿ ನೋಡಲು, ಸ್ಪಶರ್ಿಸಲು ಸಾಧ್ಯವಿಲ್ಲದಿರುವುದರಿಂದ ವೈಜ್ಞಾನಿಕವಾಗಿ ಅದು ಇಲ್ಲ! ಅದು ಬಿಡಿ. ತೂಕ ನೋಡುವ ಯಂತ್ರದಲ್ಲಿ ನಿಮ್ಮ ದೇಹದ ತೂಕ ಲೆಕ್ಕ ಹಾಕಿ. ಈಗ ಮನಮೋಹಿಸುವ ಹಾಡೊಂದನ್ನು ಕೇಳಿ. ಐದಾರು ನಿಮಿಷ ಮೈಮರೆತ ನೀವು ಯಾವುದೋ ಲೋಕದಲ್ಲಿ ತೇಲಾಡಿಬಿಡುತ್ತೀರಿ. ಈಗ ಮತ್ತೆ ನಿಮ್ಮ ತೂಕ ಲೆಕ್ಕ ಹಾಕಿ. ಬದಲಾಗುವುದೇನು? ನಿಮ್ಮ ದೇಹದಲ್ಲಿನ ರಕ್ತ, ಮೂಳೆ, ಮಾಂಸಗಳ ಪ್ರಮಾಣದಲ್ಲಿ ವ್ಯತ್ಯಾಸ ಕಂಡುಬರುವುದೇನು? ಮತ್…