Posts

Showing posts from September, 2015

NEWS FEED

1. Govt has launched schoolarships and educational loans. For more information please visit www.vidyalakshmi.co.in

2. Get latest information about malware, security best practices, countermeasures, security tools and download the- Free Bot Removal Tool- to secure/disinfect your system. Visit - www.cyberswachhtakendra.gov.in. An initiative by Govt. of India, Ministry of Electronics and IT (MeitY)

3. Advertisement page is available. Interested may contact Admin at 8880207888 for placement of any advertisement.It's totally FREE!!

KARADA SAMBHRAMA

Image

KARADA PLUS ANDROID APP

KARADA BRAHMANA SANGHA (KA.BRA.SA) in the name of KARADA PLUS Android app is really required or not? Please suggest.

ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!

ಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು ಸ್ನೇಹಿತರು, ಬಂಧು-ಬಾಂಧವರು ಹಾಗೂ ಸಹೋದ್ಯೋಗಿಗಳ ಮುಂದೆ ಹರಡಿಕೊಳ್ಳುತ್ತಾರೆ, ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವ ಮೂಲಕ ತಾವು ಹಗುರಾಗಿದ್ದೇವೆಂದು ಭಾವಿಸುತ್ತಾರೆ.
ನಮ್ಮ ಕಷ್ಟಗಳನ್ನು ಬೇರೆಯವರ ಮುಂದೆ ಹೇಳಿಕೊಂಡರೆ, ಹಂಚಿಕೊಂಡರೆ ಅದರ ಭಾರ ಹೇಗೆ ಕಡಿಮೆಯಾಗುತ್ತದೆ?
ನಮ್ಮ ತೊಂದರೆಗಳನ್ನು ನಮಗೆ ಬೇಕಾದವರ ಮುಂದೆ ಹೇಳಿಕೊಳ್ಳುವುದರಿಂದ ಸಲಹೆ, ಮಾರ್ಗದರ್ಶನದ ರೂಪದಲ್ಲಿ ಒಂದಷ್ಟು ಸಹಾಯ ಸಿಗಬಹುದು. ಮನಸ್ಸಿನಲ್ಲಿ ಮಡುಗಟ್ಟಿದ ಭಾವನೆಗಳನ್ನು ಹರಿಯಬಿಟ್ಟಾಗ, ಒಂದಷ್ಟು ರಿಲೀಫ್ ಸಿಗಬಹುದು. ನಮ್ಮ ಕಷ್ಟಗಳಿಗೆ ಸ್ನೇಹಿತರು ಪರಿಹಾರೋಪಾಯ ಸೂಚಿಸಬಹುದು. ಹೆಚ್ಚೆಂದರೆ ಹಣಕಾಸಿನ ನೆರವನ್ನೂ ನೀಡಬಹುದು. ಕೆಲವೊಮ್ಮೆ ಮನಸ್ಸಿನಲ್ಲಿಯೇ ಇಟ್ಟುಕೊಂಡು ಎಲ್ಲವನ್ನೂ ನುಂಗಿಕೊಂಡು ಒಳಗೊಳಗೇ ಪರಿತಪಿಸುವ ಬದಲು ನಾಲ್ಕು ಜನರ ಮುಂದೆ ಹೇಳಿಕೊಂಡಾಗ ಸಾಂತ್ವನ ಸಿಗುವುದು ಸುಳ್ಳಲ್ಲ.
ಇಲ್ಲಿ ಬಹಳ ಮುಖ್ಯವಾದ ಸಂಗತಿಯೇನೆಂದರೆ ನೀವು ನಿಮ್ಮ ಕಷ್ಟಗಳನ್ನು, ವೈಯಕ್ತಿಕ ಸಮಸ್ಯೆಗಳನ್ನು ಯಾರ ಮುಂದೆ ಹೇಳಿ–ಕೊಳ್ಳುತ್ತಿದ್ದೀರಿ ಎಂಬುದು. ಆತನೋ, ಆಕೆಯೋ, ನಿಮ್ಮ ಸಮಸ್ಯೆ–ಗಳನ್ನು ಕಾಪಾಡು–ವಷ್ಟು ನಿಯತ್ತು ಉಳ್ಳವರಾಗಿರಬೇಕು. ನಿಮಗೆ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನ, ಸಾಂತ್ವನ, ಸಮಾಧಾನ ಹೇಳುವಷ್ಟು ಪ್ರಬುದ್ಧರಾಗಿರಬೇಕು. ಅವರ ಸಲಹೆ-ಸಾಂತ್ವನಗಳು ಆ ಕ್ಷಣದಲ್ಲಿ ನಿಮ…

PRAKRUTHI VIKOPA

Image

KO.VEM.SU.RA

Image

FACES OF -2015

Image

ಹಾದಿ ತಪ್ಪಾದರೆ ಎದ್ದ ಕುಂಡಲಿನಿಯೇ ಬೀಳಿಸಬಹುದು!!

Image
1996 ರ ವಿಶ್ವಕಪ್ ಕ್ರಿಕೆಟ್ ನೆನಪಿದೆಯಾ? ಕ್ವಾರ್ಟ್‍ರ್ ಫೈನಲ್ ಪಂದ್ಯ. ಪಾಕಿಸ್ತಾನದೊಂದಿಗೆ ಭಾರತದ್ದು. ಬೆಂಗಳೂರಿನಲ್ಲಿ ನಡೆದಿತ್ತು. ಅಮೀರ್ ಸೋಹೈಲ್ ವೆಂಕಟೇಶ್ ಪ್ರಸಾದರ ಚೆಂಡನ್ನು ಬೌಂಡರಿಗಟ್ಟಿ ‘ ಹೇಗಿದೆ?’ ಎಂದು ವಿಕೃತ ನಗೆ ನಕ್ಕಿದ್ದರು. ಅದು ವೆಂಕಟೇಶ ಪ್ರಸಾದರನ್ನು ಅದ್ಯಾವ ಪರಿ ಕೆಣಕಿತ್ತೆಂದರೆ, ಇದ್ದ ಬದ್ದ ಶಕ್ತಿಯನ್ನೆಲ್ಲಾ ಕ್ರೋಢೀಕರಿಸಿ ಆತ ಎಸೆದ ಮರು ಚೆಂಡು ವಿಕೇಟನ್ನು ಉರುಳಿಸಿ ಅಮೀರ್ ಸೋಹೈಲ್‍ರನ್ನು ಪೆವಿಲಿಯನ್‍ಗಟ್ಟಿತ್ತು. ಎಲ್ಲಾ ಕ್ರಿಕೆಟ್ ಪ್ರೇಮಿಗಳಲ್ಲೂ ಮಿಂಚು ಹರಿದಿತ್ತು. ಅದು ವೆಂಕಿ ಜೀವನದ ‘ಬೆಸ್ಟ್ ಬಾಲ್’.
ಈ ರೀತಿಯ ಅನುಭವ ನಿಮಗೂ ಆಗಿಲ್ವಾ? ಯಾರೋ ಕೆಣಕಿದರು ಅಂತ ನಿಮ್ಮೊಳಗಿನ ಶಕ್ತಿ ಇದ್ದಕ್ಕಿದ್ದಂತೆ ಜಾಗೃತವಾಗಿ ಸೂಕ್ತ ಉತ್ತರ ಕೊಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು! ಆಗಿರಲೇಬೇಕು. ಆಕ್ರೋಶ ಬಂದಾಗ ಏಕಮುಖವಾಗಿ ಆಲೋಚಿಸಲು ಶುರು ಮಾಡುತ್ತೇವಾದ್ದರಿಂದ ಇದ್ದಕ್ಕಿದ್ದಂತೆ ಕುಂಡಲಿನಿ ಜಾಗೃತವಾಗಿ ಸುಷುಮ್ನಾ ನಾಡಿಯ ಮೂಲಕ ಹರಿಯಲಾರಂಭಿಸುತ್ತದೆ. ಅಪಾರವಾದ ಶಕ್ತಿಯ ಉತ್ಪಾದನೆಯಾಗುತ್ತದೆ. ಅದೊಂದು ರೀತಿ ದೇಹದೊಳಗೆ ದೆವ್ವ ಹೊಕ್ಕಿದ ಅನುಭವ. ಕೋಪದಿಂದ ಪ್ರೇರೇಪಿತರಾಗಿದ್ದರಿಂದ ಸಹಜವಾಗಿಯೇ ಈ ಶಕ್ತಿಯ ಬಳಕೆ ಋಣಾತ್ಮಕ ಮಾರ್ಗದಲ್ಲಿಯೇ ಆಗುತ್ತದೆ. ಸ್ವಲ್ಪ ಹೊತ್ತು ಕಳೆದ ಮೇಲೆ ಕುಂಡಲಿನಿ ಸಹಜ ಸ್ಥಿತಿಗೆ ಮರುಳುತ್ತದೆ. ನಾವು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಕುಳಿತಿರುತ್ತೇವೆ ಅಷ್…